ನಾಸ್ತಿಕರೆಂಬ ಕುರುಡು ಆಸ್ತಿಕರು
ಆಸ್ತಿಕರೆಂಬ ಕುರುಡು ನಾಸ್ತಿಕರು
ಕಣ್ತೆರೆದು ಮಾಡರು ಅಂತರಂಗ ಶುದ್ಧಿ
ಬಹಿರಂಗ ಶುದ್ಧಿಯಲ್ಲೇ ಕರ್ಚು ಮಾಡುವರು ಇರುವ ಬುದ್ಧಿ
ಆಸ್ತಿಕರಾದರೋ ಮಾಡುವರು ಪೂಜೆ ಕಥೆ ಪುರಾಣ
ಕಥೆ ಹೇಳಿದಂತೆ ನಡೆದುಕೊಳ್ಳುವರು ಭಯದ ಕಾರಣ
ಚೌತಿಯ ಚಂದ್ರ ಕಂಡರೆ ಅರಿವರು ಮಾನ ಹರಣ
ಭಯದಿ ಬದುಕುತಲಿಹರು ಅವನರಿಯದ ನಾಸ್ತಿಕರು
ಮಾನವೀಯತೆಯೇ ಧರ್ಮವೆಂದಿರುವ ನಾಸ್ತಿಕರು
ಜಾತಿ ಧರ್ಮ ದೇವರಿಂದ ದೂರ ಹೋದರು
ಕಟ್ಟುಪಾಡು ಮೀರಿದ ಪರಸಹಕಾರ ಸಹಾಯವೇ ಧ್ಯೇಯವೆಂದರು
ಈ ಧ್ಯೇಯವೇ ದೇವರೆನ್ನಲು ಆದರಿವರು ಆಸ್ತಿಕರು
ಎಲ್ಲಿ ಪ್ರೀತಿ ಪ್ರೇಮವೆಂಬ ಭಕ್ತಿ ಇರುವುದೋ ಅಲ್ಲಿ ದೇವರು
ಎಲ್ಲಿ ಮಾನವೀಯತೆ ಹರಿವುದೋ ಅಲ್ಲಿ ದೇವರು
ಅರಿಯಿರಿ ಆಸ್ತಿಕ ನಾಸ್ತಿಕರೆನ್ನುವ ಮೊದಲು
ನೀವು ಭಯವೆಂಬ ಭಕ್ತಿ ಇರುವ ಆಸ್ತಿಕರೋ ಇಲ್ಲ ಮಾನವೀಯತೆಯಿಲ್ಲದ ನಾಸ್ತಿಕರೋ