ನೆಲಚೆಂಡನಿಂದಿಕ್ಕಿ (away from earth)ಅನ್ಯಗ್ರಹದೆಡೆಗೆ ಸಾಗುತಿದೆ ನೌಕೆ
ದೂರ ಸರಿದಂತೆಲ್ಲ ಹಳಯ ನೆನಪುಗಳ ಮರೆಯುವ ಭಾವ ಬಾನಾಡಿಗನಲ್ಲಿ
ಅಂದು ಅಮಲಿನ ಚಾಲನೆ ,ತಂದೊಡ್ಡಿತೊಂದು ಅಪಾಯ
ತಾನೇಗೋ ಪಾರಾದೆ , ಆದರೆ ನಿಲ್ಲಿಸಿತವಳ ಹೃದಯ
ದಿನಾಲೂ ಎದರು ಕಂಡು ಕೊಲ್ಲುತಿಹಳು ಎನ್ನ
ಅವಳ ಆ ಕಡೆಯ ಉಲಿಗಳೇ ಪ್ರತಿದ್ವನಿಸುತ್ತಿವೆ ಇನ್ನ
ಮೌನ, ಇದು ನೋವಿನ ಗುಣವೋ ಇಲ್ಲ ಮದ್ದೋ
ಈ ಮಾತು ಕಹಿಯೋ , ಬದುಕು ಬರಡೋ
ತನ್ನ ತಾನೇ ಶಪಿಸುತ ಬದಕುವುದೋ , ಮರೆಯುವುದೋ
ತನ್ನ ನೋವಿಗೆ ಉತ್ತರ ಸಿಗದೇ ಪರಿತಪಿಸುತಿಹನು
ಕರೆಯೋಲೆ ಕಂಡಿತು ಬಾನರಿಕೆ (astronomy )ಪ್ರಯೋಗದಲಿ
ತಿರುಗಿ ಬರದಿರುವ ದೂರ ಕಲ್ಪನೆಯಂತಿರುವ ಗ್ರಹದ ಯಾನದ ಕಟ್ಟಳಿಯಲಿ
ಒಪ್ಪಿ ಹಾರುತಿಹೆನಿಂದು ಬಹುದೂರ ನೌಕೆಯಲಿ
ತನ್ನ ನೋವಿನಿಂದ ಹಳೆಯ ನೆನಪುಗಳಿಂದ ,ಕಹಿಯ ವಾಸ್ತವದಿಂದ
ಈ ಹೊಸಗ್ರಹವೂ ನಾ ತೊರೆದ ಚಂಡಿನ (earth )ಪ್ರತಿರೂಪದಂತಿತ್ತು
ಅದೇ ಭಾಷೆ ,ಅದೇ ದೇಶ, ಇಲ್ಲಿಯೂ ಅದೇ ಕಾಲಮಾನ
ಚಿರಪರಿಚಿತ ಜನರು ಕಂಡರು , ಇವರು ಕೂಡ ತದ್ರೂಪರಿಲ್ಲಿ
ಏನೋ ಉತ್ಸಾಹದಿಂದ ಚೀರಿದೆ , ಅಗೋ ನಾನು ,ಜೊತೆಗೆ ಅವಳು, ಅವಳೂ ಇರುವಳಿಲ್ಲಿ
ಕೊನೆಗೂ ಎನ್ನ ನೋವಿಗಿಂದು ಉತ್ತರ ಸಿಕ್ಕಿತು
ಎಂದೆನ್ನ ತದ್ರೂಪಿಗಳ ಬದುಕ ನೋಡಿ ನಗುತಿರೆ
ನಿದ್ದೆಯಿಂದ ಎಚ್ಚರಿಸುವಂತೆ ಕೇಳಿತೊಂದು ಕೂಗು, ನೌಕೆ ಹೊಸಗ್ರಹದ ಬಳಿಯಿರುವುರೆಂದು
ಕಲ್ಪನೆಯ ನಗುವಿನಿಂದ ವಾಸ್ತವದ ನೋವಿನೆಡೆಗೆ ಚಲಿಸಿತು ಮನಸು ಹೊಸಗ್ರಹವ ಎದರುನೋಡುತ