ಶನಿವಾರ, ಮಾರ್ಚ್ 1, 2014

ಹುಡುಕುತಿರುವೆ

ಹುಡುಕುತಿರುವೆ ನಾ  ನಿನ್ನ
ಹಗಲು ಇರುಳೆನ್ನದೆ ,ಹುಡುಕುತಿರುವೆ ನಾ  ನಿನ್ನ

ಇರುಳ ಕಡಲ ದಿಕ್ಸೂಚಿ ನೀನು 
 ನಿನ್ನರಸಿ ಬರುತಿರುವ ನಾವಿಕ  ನಾನು 
ಅಲೆಗಳ  ಏರಿಳಿತದಲಿ ಮರೆಯಾಗುತಿರುವೆ  ನೀನು 
ಮತ್ತೊಮ್ಮೆ  ಎಂದೋ ಹೊಳೆದು  ನಗುತಲಿರುವೆ  ನೀನು 

ಹುಡುಕುತಿರುವೆ ನಾ  ನಿನ್ನ
ಹಗಲು ಇರುಳೆನ್ನದೆ ,ಹುಡುಕುತಿರುವೆ ನಾ  ನಿನ್ನ 

ಈ  ಅಲೆಗಳ ಆಟದಲಿ ದಾರಿ ತಪ್ಪಿದೆ ನಾನು 
ಅಂಧಕಾರದಲಿ ಕಳೆದು ಹೋದೆ ನಾನು 
ತಿರುಗಿ ಬರಲಾರದಷ್ಟು ಮುಂದೆ ಸಾಗಿದೆ ನಾನು 
ಬದುಕಿನ ಕಣ್ಣಾ ಮುಚ್ಚಾಲೆಯ ಗೊಂಬೆಯಾದೆ ನಾನು 

ಹುಡುಕುತಿರುವೆ ನಾ  ನಿನ್ನ
ಹಗಲು ಇರುಳೆನ್ನದೆ ,ಹುಡುಕುತಿರುವೆ ನಾ  ನಿನ್ನ 

ನಾವಿಕನೆಂದೂ ಸೋಲ ಒಪ್ಪನು 
ಮತ್ತೆ ಬರುವೆನು ನಿನ್ನ ಬಳಿಗೆ 
ಮತ್ತಷ್ಟು ಬೆಟ್ಟದಷ್ಟು ಪ್ರೇಮದೊಂದಿಗೆ 
ಆ  ಚಿಕ್ಕ ನಗುವ ಕಾಣಲು ನಿನ್ನ ಮೊಗದಲಿ 
ಆ ಹೊಳಪ ಕಾಣಲು ನಿನ್ನ ಕಣ್ಣಲಿ 

8 ಕಾಮೆಂಟ್‌ಗಳು:

  1. ತುಂಬಾ ಚೆನ್ನಾಗಿದೆ ಅನಂತು :)

    ಈ ಸಾಲುಗಳು ತುಂಬಾ ಸೂಪರ್ :)

    ಮತ್ತೆ ಬರುವೆನು ನಿನ್ನ ಬಳಿಗೆ
    ಮತ್ತಷ್ಟು ಬೆಟ್ಟದಷ್ಟು ಪ್ರೇಮದೊಂದಿಗೆ
    ಅ ಚಿಕ್ಕ ನಗುವ ಕಾಣಲು ನಿನ್ನ ಮೊಗದಲಿ

    ಪ್ರತ್ಯುತ್ತರಅಳಿಸಿ