ಏನಿದೇನಿದೇನಿ ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ
ಆಯಾಮವಿಲ್ಲದಿರೆ ಬಿಂದು
ದ್ವಿಗುಣಿಸಿ ಸಾಲಾಯಿತು ಒಂದರಲಿ
ಎರೆಡನೆ ಆಯಾಮದಿ ಕಂಡಿತು ವೃತ್ತ
ವಾಯಿತು ಗೋಳ ಕಣ್ಣರಳಿಸಿ ಜಗವ ನೋಡಲು
ಏನಿದೇನಿದೇನಿ ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ
ಗೋಳದ ಅಪರಿಮಿತ ಮಿತಿಯಲೆಮ್ಮ ಚಲನೆ
ಅಲ್ಲಿ ಇಲ್ಲಿ ಎಲ್ಲೋ ಅಲ್ಲಿ ಮಗದೊಮ್ಮೆ ಇಲ್ಲಿ
ಮೂರೂ ಆಯಾಮದಲಿ ಮನಬಂದಂತೆ ಅಲಿಯುತ
ಕಾಲಮಾನದಿ ಜಗವು ನಡೆಯುತಿಹುದು
ಏನಿದೇನಿದೇನಿ ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ
ಆದರೆ ಕಾಲವಾದರೂ ಎಂತಹದು
ಗುಣ ಬದಲಾಯಿಸುವುದು ಗುರುತ್ವದೆದುರು
ಕಾಲದ ವೇಗವೇ ತಗ್ಗುವುದು ಬಲವೇರಿದಂತೆ
ನಿಶ್ಚಲವಾಯಿತಿದು ಕಪ್ಪು ರಂಧ್ರದಲಿ
ಏನಿದೇನಿದೇನಿ ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ
ಅರಿವರೋ ಕಾಲವ ಗುರುತ್ವ ಮಾನದಲಿ
ಕಂಡರೋ ಕಾಲವ ನಲ್ಗನೆ ಆಯಾಮದಲಿ
ಈ ಹೊಸ ಆಯಾಮದಲಿ ದ್ವಿಗುಣಿಸಿ ಸಾಲಾಗುವುದೋ
ಭೂಗೋಳ, ಆಯಾಮ ಹೆಚ್ಚಿ ಚುಕ್ಕಿ ಸಾಲಾದಂತೆ
ಏನಿದೇನಿದೇನಿ ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ
ಈ ನಿರಂತರ ಸಾಲಿನ ಭೂಗೋಳ
ವೊಂದೊಂದು ಪ್ರತಿನಿಧಿಸುವುದೊಂದೊಂದು ಕಾಲ
ಒಮ್ಮೆ ಅಲ್ಲಿ ಮತ್ತೊಮ್ಮೆ ಇಲ್ಲಿ ಹೀಗೆ
ವಿವಿಧ ಕಾಲದ ಗೋಳಗಳಲಿ ಚಲಿಸಲು
ಆಯಿತಿದು ಕಾಲಯಾನ ಎಂದಳ್ತಿಯಿಂ ನೋಡುತಿರೆ ಗುರುತ್ವಮಾನದೆಡೆಗೆ
ಎಂದೆನುತ ಮಾಡುತಿರುವಿರೆ ಕಾಲ ಹರಣ
ಆಯಾಮವಿಲ್ಲದಿರೆ ಬಿಂದು
ದ್ವಿಗುಣಿಸಿ ಸಾಲಾಯಿತು ಒಂದರಲಿ
ಎರೆಡನೆ ಆಯಾಮದಿ ಕಂಡಿತು ವೃತ್ತ
ವಾಯಿತು ಗೋಳ ಕಣ್ಣರಳಿಸಿ ಜಗವ ನೋಡಲು
ಏನಿದೇನಿದೇನಿ ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ
ಗೋಳದ ಅಪರಿಮಿತ ಮಿತಿಯಲೆಮ್ಮ ಚಲನೆ
ಅಲ್ಲಿ ಇಲ್ಲಿ ಎಲ್ಲೋ ಅಲ್ಲಿ ಮಗದೊಮ್ಮೆ ಇಲ್ಲಿ
ಮೂರೂ ಆಯಾಮದಲಿ ಮನಬಂದಂತೆ ಅಲಿಯುತ
ಕಾಲಮಾನದಿ ಜಗವು ನಡೆಯುತಿಹುದು
ಏನಿದೇನಿದೇನಿ ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ
ಆದರೆ ಕಾಲವಾದರೂ ಎಂತಹದು
ಗುಣ ಬದಲಾಯಿಸುವುದು ಗುರುತ್ವದೆದುರು
ಕಾಲದ ವೇಗವೇ ತಗ್ಗುವುದು ಬಲವೇರಿದಂತೆ
ನಿಶ್ಚಲವಾಯಿತಿದು ಕಪ್ಪು ರಂಧ್ರದಲಿ
ಏನಿದೇನಿದೇನಿ ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ
ಅರಿವರೋ ಕಾಲವ ಗುರುತ್ವ ಮಾನದಲಿ
ಕಂಡರೋ ಕಾಲವ ನಲ್ಗನೆ ಆಯಾಮದಲಿ
ಈ ಹೊಸ ಆಯಾಮದಲಿ ದ್ವಿಗುಣಿಸಿ ಸಾಲಾಗುವುದೋ
ಭೂಗೋಳ, ಆಯಾಮ ಹೆಚ್ಚಿ ಚುಕ್ಕಿ ಸಾಲಾದಂತೆ
ಏನಿದೇನಿದೇನಿ ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ
ಈ ನಿರಂತರ ಸಾಲಿನ ಭೂಗೋಳ
ವೊಂದೊಂದು ಪ್ರತಿನಿಧಿಸುವುದೊಂದೊಂದು ಕಾಲ
ಒಮ್ಮೆ ಅಲ್ಲಿ ಮತ್ತೊಮ್ಮೆ ಇಲ್ಲಿ ಹೀಗೆ
ವಿವಿಧ ಕಾಲದ ಗೋಳಗಳಲಿ ಚಲಿಸಲು
ಆಯಿತಿದು ಕಾಲಯಾನ ಎಂದಳ್ತಿಯಿಂ ನೋಡುತಿರೆ ಗುರುತ್ವಮಾನದೆಡೆಗೆ