ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ
ಬಾಲ್ಯದ ನೆನಪಿನಲೂ ಅವ ಕುಂಟ
ಆದರೂ ಯಾರೂ ಹಿಡಿಯಲಾರದ ತುಂಟ
ಹೊರ ಪ್ರಪಂಚವನರಿಯದ ವಯಸದು
ಮಿತಿಯನರಿಯಲಾರದ ಮನಸದು
ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ
ಕಾಲ ಕಳೆದಂತೆ ಸಂತೋಷ ಕಮರಿತು
ಮಿತಿಯ ಅರಿವು ಮತಿಗಾಯಿತು
ಮೊದಮೊದಲು ಎಲ್ಲರಂತೆ ಬೆರೆಯುತಿದ್ದ
ಆದರೆ ಉಳಿದವರು ಮೇಲೆಂಬ ಭಾವನೆ ಬರಲು ಕ್ಷೀಣಿಸಿದ್ದ
ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ
ದೇಹದ ಬೇಲಿ ಮನಸಿಗತ್ತಿತು
ಕೀಳರಿಮೆ , ನಿಸ್ಸಹಾಯಕತೆ ಮನವ ತುಂಬಿತು
ಆತ್ಮಸ್ಥೈರ್ಯ ಪಾತಾಳ ಹೊಕ್ಕಿತು
ಪರಾವಲಂಬಿ ಬದುಕಾಯಿತು
ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ
ಆದರಿಂದು ರಸ್ತೆ ಬಳಿ ಗೆಳೆಯನಿಗೆ ಕಾಯುತಿರಲು
ಟಕ್ ಟಕ್ ಕೋಲಿನ ಶಬ್ದ, ಏನೆಂದು ತಿರುಗಿ ನೋಡಲು
ಕರಿ ಕನ್ನಡಕದಾರಿ ಬಾಡಿದ ಮುಖವೊಂದು ಸಹಾಯ ಕೇಳಿತ್ತು
ರಸ್ತೆ ದಾಟಲಾರದಂತೆ ಚಲಿಸುತ್ತಿರುವ ವಾಹನಗಳ ಶಬ್ದ ಕೇಳಿ ಬೆದರಿತ್ತು
ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ
ಕ್ಷಣ ಮಾತ್ರದಲಿ ಹೆಗಲಿಗೆ ಹೆಗಲು ಸೇರಿತ್ತು
ಕುರುಡನಿಗೆ ಕಣ್ಣಾಗಿ ಕುಂಟನ ನಡೆ ಸಾಗುತಿತ್ತು
ಇದೇ ಮೊದಲ ಬಾರಿಗೆ ಕುಂಟನೂ ಸಹ ಪರ ಸಹಾಯವಿಲ್ಲದೆ ರಸ್ತೆ ದಾಟುತಿದ್ದ
ತನಗೆ ತಾನೇ ಎಳೆದುಕೊಂಡ ಮನದ ಮಿತಿಯ ಮುರಿಯುತಿದ್ದ
ಕುಂಟನೊಬ್ಬ ರಸ್ತೆ ದಾಟುತಿದ್ದ ,ಇನ್ನೊಬ್ಬನ ದಾಟಿಸುತಿದ್ದ
ತನ್ನ ಮನೋರೋಗವ ತೊರೆದು ಪುನಃ ಬಾಲ್ಯದ ಮಂದಹಾಸ ಬೀರುತಿದ್ದ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ