ಸೋಮವಾರ, ಆಗಸ್ಟ್ 10, 2015

ಜೀವಂತ ಕನಸು

ಹೃದಯ ಬಡಿತ ಉಳಿಸಲು ವೈದ್ಯರ ಹೋರಾಟ
ಕ್ಷಣ ಕ್ಷಣ ಕಳೆದಂತೆ ಸೋಲುತಿರುವ ಹೃದಯ
ಈ ಹೃದಯದ ಉಸಿರಿಗೆ ಉಸಿರಾದ ಇನ್ನೊಂದು ಜೀವ
ಮಿಸುಕಾಡದೆ ನೋಡುತಿದೆ ತನ್ನ ಸಿರಿ ಒಲವ

ಅವನೊಬ್ಬ ಮಾತಿನ ಮಲ್ಲ
ಮಾತಲೇ ಲಲನೆಯರ ಸೆಳೆಯಲು ಬಲ್ಲ
ಅವಳೊಬ್ಬಳು ಚಂದದ ಹುಡುಗಿ
ಕನಸಿನ ಲೋಕದಿ ವಿಹರಿಸೋ ಬೆಡಗಿ

ಬೇಟಿಯಾದವರೀ ಚಿಕ್ಕ ಪ್ರಪಂಚದಲಿ
ಪರಿಚಯದಿಂದ ಸ್ನೇಹ , ಕನಸ ತುಂಬಿತು ಪ್ರೇಮ
ಅವಳ ಕುರುಡು ಲೋಕದ ಪ್ರೇಮದರ್ಪಣ
ಇವನಿಗೇನೋ ಇದು ಕೇವಲ ಕಾಲ ಹರಣ

ಎಷ್ಟು ದಿನ ನಡಿವುದೀ ಕಾಲ ಹರಣ
ಎಲ್ಲದಕೂ ಕೊನೆಯುಂಟು, ಕೊನೆಯುಂಟು ಕಾಲಕು
ಕನಸಿನ ಲೋಕಕು, ಉಸಿರಿಗೂ , ಆ ಭ್ರಮೆಗು
ಕೊಲ್ಲಬೇಕೆನೆಸಿದರೂ ಕೊಲ್ಲಲಾದಳು ಅವಳ ಕನಸಿನ ಲೋಕದಲಿ

ಕನಸಿನ ಲೋಕದಲಿ ಸೋಲುತಿರುವ ಇನಿಯನ ಹೃದಯ
ಅದನ್ನುಳಿಸಲು ವೈದ್ಯರ ಅಪರಿಮಿತ ಹೋರಾಟ
ಈ ಹೃದಯದ ಉಸಿರಿಗೆ ಉಸಿರಾದ ಇನ್ನೊಂದು ಜೀವ
ಮಿಸುಕಾಡದೆ ನೋಡುತಿದೆ ತನ್ನ ಸಿರಿ ಒಲವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ