ಶುಕ್ರವಾರ, ಸೆಪ್ಟೆಂಬರ್ 2, 2016

ಬಾನಾಡಿಗ (astronaut)

ನೆಲಚೆಂಡನಿಂದಿಕ್ಕಿ (away from earth)ಅನ್ಯಗ್ರಹದೆಡೆಗೆ ಸಾಗುತಿದೆ ನೌಕೆ
ದೂರ ಸರಿದಂತೆಲ್ಲ ಹಳಯ ನೆನಪುಗಳ ಮರೆಯುವ ಭಾವ ಬಾನಾಡಿಗನಲ್ಲಿ

ಅಂದು ಅಮಲಿನ ಚಾಲನೆ ,ತಂದೊಡ್ಡಿತೊಂದು ಅಪಾಯ
ತಾನೇಗೋ  ಪಾರಾದೆ , ಆದರೆ ನಿಲ್ಲಿಸಿತವಳ ಹೃದಯ
ದಿನಾಲೂ ಎದರು ಕಂಡು ಕೊಲ್ಲುತಿಹಳು ಎನ್ನ
ಅವಳ ಆ ಕಡೆಯ ಉಲಿಗಳೇ ಪ್ರತಿದ್ವನಿಸುತ್ತಿವೆ ಇನ್ನ

ಮೌನ, ಇದು  ನೋವಿನ ಗುಣವೋ ಇಲ್ಲ ಮದ್ದೋ
ಈ ಮಾತು ಕಹಿಯೋ , ಬದುಕು ಬರಡೋ
ತನ್ನ ತಾನೇ ಶಪಿಸುತ ಬದಕುವುದೋ , ಮರೆಯುವುದೋ
ತನ್ನ ನೋವಿಗೆ ಉತ್ತರ ಸಿಗದೇ ಪರಿತಪಿಸುತಿಹನು

ಕರೆಯೋಲೆ ಕಂಡಿತು ಬಾನರಿಕೆ (astronomy )ಪ್ರಯೋಗದಲಿ
ತಿರುಗಿ ಬರದಿರುವ  ದೂರ ಕಲ್ಪನೆಯಂತಿರುವ ಗ್ರಹದ ಯಾನದ ಕಟ್ಟಳಿಯಲಿ
ಒಪ್ಪಿ ಹಾರುತಿಹೆನಿಂದು  ಬಹುದೂರ ನೌಕೆಯಲಿ
ತನ್ನ ನೋವಿನಿಂದ ಹಳೆಯ ನೆನಪುಗಳಿಂದ ,ಕಹಿಯ ವಾಸ್ತವದಿಂದ

ಈ ಹೊಸಗ್ರಹವೂ ನಾ ತೊರೆದ ಚಂಡಿನ (earth )ಪ್ರತಿರೂಪದಂತಿತ್ತು
ಅದೇ ಭಾಷೆ ,ಅದೇ ದೇಶ, ಇಲ್ಲಿಯೂ ಅದೇ ಕಾಲಮಾನ
ಚಿರಪರಿಚಿತ ಜನರು ಕಂಡರು  , ಇವರು ಕೂಡ ತದ್ರೂಪರಿಲ್ಲಿ
ಏನೋ  ಉತ್ಸಾಹದಿಂದ ಚೀರಿದೆ , ಅಗೋ  ನಾನು ,ಜೊತೆಗೆ ಅವಳು, ಅವಳೂ ಇರುವಳಿಲ್ಲಿ

ಕೊನೆಗೂ ಎನ್ನ ನೋವಿಗಿಂದು ಉತ್ತರ ಸಿಕ್ಕಿತು
ಎಂದೆನ್ನ ತದ್ರೂಪಿಗಳ ಬದುಕ ನೋಡಿ ನಗುತಿರೆ
ನಿದ್ದೆಯಿಂದ ಎಚ್ಚರಿಸುವಂತೆ ಕೇಳಿತೊಂದು ಕೂಗು, ನೌಕೆ  ಹೊಸಗ್ರಹದ ಬಳಿಯಿರುವುರೆಂದು
ಕಲ್ಪನೆಯ ನಗುವಿನಿಂದ ವಾಸ್ತವದ ನೋವಿನೆಡೆಗೆ ಚಲಿಸಿತು ಮನಸು ಹೊಸಗ್ರಹವ ಎದರುನೋಡುತ



ಶನಿವಾರ, ಡಿಸೆಂಬರ್ 19, 2015

ಖಗೋಳ ಪ್ರೇಮ

ಬಿಸಿಲಿನ ಬೇಗೆಯಿಂ ಬಸವಳಿದ ಭುವಿಯು
ರವಿಯ ಅವಸಾನವನೇ ಎದರುನೋಡುತಿದೆ
ಶಶಿಯ ಶೀತಲ ಕಿರಣಗಳು ಬಂದೆನ್ನ  ಅಪ್ಪಿ
ಎಂದು ಆಲಂಗಿಸುವುದೋ  ಎಂದು ಕಾತರಿಸುತಿದೆ

ಆದರೆಲ್ಲಿ , ಚಂದಿರನ ಸುಳಿವಿಲ್ಲ ಆಗಸದಿ
ನಾಚಿ ಮೇಘಗಳೆಡೆಯಲ್ಲಿ ಮರೆಯಾಗಿರುವುದೋ
ಗ್ರಹಣದ ತೀಕ್ಷ್ಣ   ತಾಪದಿ ನರಳುತಿರುವುದೋ ಇಲ್ಲ
ಮುಂಗೋಪದಿ ಎನಗೆ ಬೆನ್ನ ತೋರಿಸಿರುವುದೋ

ಅಂದು ನೀ ಆಕಾರ್ಷಣೆಯ ಬಲದಿಂದ
ಎನ್ನ ಚಲನ ಅಕ್ಷದೊಳು ತಂದಿಟ್ಟೆ  ಸ್ಥಿರತೆ 
ಬೇಸಿಗೆ ಛಳಿಯ ಅತಿರೇಕಕೆ ಕಡಿವಾಣವಿಟ್ಟೆ
ಎನ್ನೊಳಗೆ ವಿಕಸವಾಗಲು ಎಡೆಮಾಡಿಕೊಟ್ಟೆ

ಆದರಿಂದೇಕೋ ನೀ ದೂರ ಸರಿಯುತಿರುವೆ
ನೀ ದೂರ ಸರಿದಂತೆ ಸ್ಥಿರತೆಯು ಶಿತಿಲವಾಗುತಿದೆ
ನಿನ್ನ ಕಾಣಲೆನ್ನ ಭಾವನೆಯ ಅಲೆಗಳು ಗಗನ ಮುಟ್ಟುತ್ತಿವೆ
ಈ ಅಮಾವಾಸ್ಯೆ ಎನ್ನೊಳ್  ಅಂಧಕಾರವನೇ ತುಂಬುತಿದೆ

ಆದರೂ ನಿನ್ನ ಹಿಂದೆಯೇ ಬರಲಾಗದು ಎನಗೆ
ಎನ್ನ ಗುರಿಯೇ ಬೇರೆ, ಪಥವೂ  ಬೇರೆ
ನೀ ಹರಡಿದ ಅಂಧಕಾರವೂ ಎನ್ನೊಳಗೆ ತುಂಬಿರುವುದೊಂದು ನಂಬಿಕೆ
ತಿಂಗಳಿಗೊಮ್ಮೆಯಾದರೂ ಬರಲೇಬೇಕಲ್ಲ ಹುಣ್ಣಿಮೆ


Facts which you need to know to understand the concept:
1.Initial days moon was some thousand km away from earth now moved as for as 384,400 km and still drifting away.

2.If we consider the bright side of the moon as face then dark side can be called as its back which would point to us during no moon day

3.During no moon day and full moon day ,gravitational pull of moon  results in high tides and low tides

4.The Moon has been a stabilizing factor for the axis of rotation of the Earth. If you look at Mars, for instance, that planet has wobbled quite dramatically on its axis over time due to the gravitational influence of all the other planets in the solar system. Because of this obliquity change, the ice that is now at the poles on Mars would sometimes drift to the equator. But the Earth’s moon has helped stabilize our planet so that its axis of rotation stays in the same direction. For this reason, we had much less climatic change than if the Earth had been alone. And this has changed the way life evolved on Earth
The Moon has been a stabilizing factor for the axis of rotation of the Earth. If you look at Mars, for instance, that planet has wobbled quite dramatically on its axis over time due to the gravitational influence of all the other planets in the solar system. Because of this obliquity change, the ice that is now at the poles on Mars would sometimes drift to the equator. But the Earth’s moon has helped stabilize our planet so that its axis of rotation stays in the same direction. For this reason, we had much less climatic change than if the Earth had been alone. And this has changed the way life evolved on Earth, - See more at: http://www.astrobio.net/topic/exploration/moon-to-mars/if-we-had-no-moon/#sthash.advkXmRi.dpuf
The Moon has been a stabilizing factor for the axis of rotation of the Earth. If you look at Mars, for instance, that planet has wobbled quite dramatically on its axis over time due to the gravitational influence of all the other planets in the solar system. Because of this obliquity change, the ice that is now at the poles on Mars would sometimes drift to the equator. But the Earth’s moon has helped stabilize our planet so that its axis of rotation stays in the same direction. For this reason, we had much less climatic change than if the Earth had been alone. And this has changed the way life evolved on Earth, - See more at: http://www.astrobio.net/topic/exploration/moon-to-mars/if-we-had-no-moon/#sthash.advkXmRi.dpuf
The Moon has been a stabilizing factor for the axis of rotation of the Earth. If you look at Mars, for instance, that planet has wobbled quite dramatically on its axis over time due to the gravitational influence of all the other planets in the solar system. Because of this obliquity change, the ice that is now at the poles on Mars would sometimes drift to the equator. But the Earth’s moon has helped stabilize our planet so that its axis of rotation stays in the same direction. For this reason, we had much less climatic change than if the Earth had been alone. And this has changed the way life evolved on Earth, - See more at: http://www.astrobio.net/topic/exploration/moon-to-mars/if-we-had-no-moon/#sthash.advkXmRi.dpuf

5. As moon  drifts away from earth, it again starts wobbling , but dont worry we would be long gone by then considering the rate at which we are polluting earth :)




ಶನಿವಾರ, ಅಕ್ಟೋಬರ್ 31, 2015

ಓಲೆಗಾರ

ಓಡುಲಿ(ಮೊಬೈಲ್ ) ಕರೆತುಂಬಿ ಮಿಣುಗುತಿದೆ ಗೊಣಗೊಣಿಸುತಿದೆ
ಅದರರಿವೇ ಇಲ್ಲದಂತೆ ಕಾಯಕ ಬಿರುಸನೆ ಸಾಗುತಿದೆ
ಜಗವನೇ ಮರೆಯುವಂತೆ ಮನ ತುಂಬಿದೆ ಕೆಲಸ
ದುಡಿಮೆಯೊಳಗೇ ಇವಳ ಸರಸ ವಿರಸ

ಗೋಪಾಲ ಓಲೆಗಾರನಂತೆ ಹಿಡಿತಂದನೊಂದೋಲೆ
ಇವಳ ಗೆಳೆಯರಿಬ್ಬರು ಬರೆದು ಕಳಸಿದ ಸುತ್ತೋಲೆ
ಇವಳ ಕಾಣದೆ ಅವರ ಮನಸು ಕುದಿಯುತಿತ್ತು
ಈ ಕೂಡಲೆ ಚಾ  ಅಂಗಡಿಗೆ ಬರಬೇಕೆಂದಿತ್ತು

ಹೆಸರಿರದ ಪತ್ರ ಕಂಡವಳಿಗಾಶ್ಚರ್ಯ
ಯಾರಿವರೀ ಗೆಳೆಯರೆಂದೆಂಬ ಕುತೂಹಲ
ಗೋಪಾಲನೆಂದೂ ಗೆಳೆಯರ ಗುಟ್ಟು ಹೊರಗಿಡನಿಹನೆಂದು
ನಡೆದೇ ಬಿಟ್ಟಳು ಚಾ ಅಂಗಡಿ ಕಡೆಗೆ

ಅರಿವಿನ  ಮುಖವೊಂದೂ ಕಾಣದೆಂ
ಶಪಿಸುತಲೇ ಕೆಟ್ಟ ಕೋಪದಿ ಕಂಡಳೀ ಗೋಪಾಲನ
ಮನವರಿತ ಗೋಪಾಲ ಅವರ ತಿಟವಿರುವುದೆಂದು ಸಲಹುತ
ದರ್ಶಕವ ತೆರೆಯಲು ಕಂಡರವರೀರ್ವರ ಪ್ರತಿಬಿಂಬ

ಬಿಂಬ ಪ್ರತಿಬಿಂಬಗಳ ನಡುವೆ ಗೆರೆಯೊಂದಿತ್ತು
ಈ ಪ್ರತಿಬಿಂಬ ಬಯಸಿದಂತೆ ಬದುಕ ಬಯಸಿತ್ತು
ಕೆಲಸದಿಂದಾಚೆ ಜನರೊಡಣೆ ಬೆರೆಯಬಯಸಿತ್ತು
ಕೂಡಲೇ ಈ  ಗೆರೆಯನಳಿಸುತ ಗೋಪಾಲನೊಡನೆ ಹರಟಲು ಎರಡು ಚಾ ಆರ್ಡರ್ ಮಾಡಿದಳು


ಶನಿವಾರ, ಅಕ್ಟೋಬರ್ 10, 2015

ಹೀಗೊಂದು ಗೆಳೆತನ

ಹೀಗೊಂದು ಗೆಳೆತನ
ಇದಕಿಲ್ಲ ಆಧುನಿಕತೆಯ ಸಿರಿತನ

ಕಿರುನಗುವಿನ ಸ್ವಾಗತ
ಕಣ್ಣೋಟದಲೇ  ಸಿಹಿಮಾತು
ಕಾಣದಿದ್ದರೆ ಮಾತ್ರ ಏನೋ ದುಗುಡ
ಇದು ಬಸ್ಸಿನಲ್ಲಿ ಪಯಣಿಸುವ ಅಪರಿಚಿತರ ಪರಿಚಯ

ಈ ಸ್ನೇಹಕೆ ಬೇಕಿಲ್ಲ ಜಂಗಮದ ಕೊಂಡಿ
ಅಂತರ್ಜಾಲವೆಂದೂ ಮಾಡದು ಸಂಧಿ
ಎಮ್  ಪೆಸರನೂ ಸರಿಯಾಗಿ ಅರಿಯದವರು
ಬಸ್ ಎಂಬ ಲೋಕದಲ್ಲಷ್ಟೇ ಚಿರಪರಿಚಿತರು

ಬದುಕ ಬಂಡಿಯ ಈ ಯಾನದೊಳು
ರಂಗ ತುಂಬುವರು ,ನಲಿವ ಹಂಚುವರು
ಅಡರು ತೊಡರಿನ ಈ ರಸ್ತೆಯಲಿ
ದಟ್ಟಣೆಯೊಡನೆ ಮಂದಗತಿಯಲಿ ಸಾಗುವ ನಮ್ಮೀ  ಯಾನದಲಿ

ಕಾಯುವಿಕೆಯ ಕಾವು ಇಲ್ಲೂ ಉಂಟು
ನಮ್ಮ ಬಂಡಿಗಾಗಿ,ಅವರ ಬರುವಿಗಾಗಿ
ಬರದಿದ್ದರೆ ಕಾವಿನ ಕಸುವು,ಕಾಯುತಲಿರುವುದು
ಭೂಮಿಯ ಮತ್ತೊಂದು ಸುತ್ತಿಗೆ,ಮತ್ತದೇ ಸಮಯಕೆ ಅವರ ಬರುವಿಕೆಗೆ

ಬಂಡಿಯಲ್ಲಿಯೇ ಇದರ ಉಗಮ ಇಲ್ಲಿಯೇ ಅಂತ್ಯ
ಇದರಾಚೆ ಮತ್ತದೇ ಜಂಗಮ ಅಂತರ್ಜಾಲದಿ ವಿಹರ
ಇವುಗಳಿಗಿಂತ ಬಲು ವಿಶಿಷ್ಟ ಈ ಗೆಳೆತನ
ಇದಕಿಲ್ಲ ಆಧುನಿಕತೆಯ ಸಿರಿತನ






ಮಂಗಳವಾರ, ಅಕ್ಟೋಬರ್ 6, 2015

ರಾಜಕುಮಾರಿ

ವರ್ಣಿಸಲೆತ್ನಿಸಿದೆ ನಾ ನಿನ್ನ
                                 ನನ್ನ ಬಿಳಿಯ ಪುಟದಲಿ
ಪದಗಳೇ ಸಿಗಲೊಲ್ಲವು
                                  ಈ ಕನ್ನಡ ನಿಘಂಟಿನಲಿ

ಚಲುವೆ ಎನ್ನೋಣವೆಂದರೆ ಶಿಲಾಬಾಲಿಕೆಯು ಚೆಲುವೆಂದರು
 ಸೌಂಧರ್ಯರಸದಿಂದ ಕಾಳಿದಾಸರು ಶಾಕುಂತಲೆಯ ಬರೆದರು
ಹೊಳೆಯುವ ನಕ್ಷತ್ರವೆನ್ನದಂತೆ ಆಗಸದಿ ಮಿಂಚುತಿವೆ ತಾರೆಗಳು
ಇವೆಲ್ಲವೂ ಮೀರಿಸಿದ ಈ ಸೌಂಧರ್ಯದ ದಾಸನಾದೆ ನಾನು
                                 ಪದಗಳಿಲ್ಲದೆ ಪರಿತಪಿಸಿದೆ ನಾನು

ಭೋರ್ಗೆರೆಯುವ ಜಲಪಾತ ರಮಣೀಯವೆಂದರು
ಕೆಂಪನೆ ಚೆಂಡಿನ ಸೂರ್ಯಸ್ತದ ಸವಿ ಸವಿದರು
ಶಿಖರವೆನ್ನೇರಿ ವನ ಸೌಂಧರ್ಯ ಕಂಡರು
ಆದರೆ ಇವೆಲ್ಲವ ಮರೆಯುವಂತೆ ಮಾಡಿವೆ
                                 ನಿನ್ನೀ ಮುತ್ತಿನ  ನೇತ್ರಗಳು


ನೀನಾಡಿದ ಮಾತುಗಳೇ ಶೃಂಗಾರ ಕಾವ್ಯ
ನೀನಿಟ್ಟ ಹೆಜ್ಜೆ ನೃತ್ಯ ರೂಪಕ
ನೀ ನಡೆದ ಹಾದಿಯೇ ಎನ್ನ ರಾಜಮಾರ್ಗ
ನಿನ್ನೀ ನಗುವೇ ಈ ಜಗಕೆ  ಪ್ರೇಮ ಚುಂಬನ

ಎಷ್ಟು ಬಣ್ಣಿಸಿದರೂ ಮುಗಿಯದೀ ವರ್ಣನೆ
ರೂಪಕ ಸಿಗದು ಮಾಡಿದರೂ ಚಿಂತನೆ
ಕವಿಗಳಿಗೇ ಸವಾಲಾಗಿದ್ದಾಳೆ ಈ ರಾಜಕುಮಾರಿ
ಬಿಡಿಸಲಾಗದ ಒಗಟು , ನನ್ನ ಬಾಳರುವಾರಿ  

ಸೋಮವಾರ, ಆಗಸ್ಟ್ 10, 2015

ಜೀವಂತ ಕನಸು

ಹೃದಯ ಬಡಿತ ಉಳಿಸಲು ವೈದ್ಯರ ಹೋರಾಟ
ಕ್ಷಣ ಕ್ಷಣ ಕಳೆದಂತೆ ಸೋಲುತಿರುವ ಹೃದಯ
ಈ ಹೃದಯದ ಉಸಿರಿಗೆ ಉಸಿರಾದ ಇನ್ನೊಂದು ಜೀವ
ಮಿಸುಕಾಡದೆ ನೋಡುತಿದೆ ತನ್ನ ಸಿರಿ ಒಲವ

ಅವನೊಬ್ಬ ಮಾತಿನ ಮಲ್ಲ
ಮಾತಲೇ ಲಲನೆಯರ ಸೆಳೆಯಲು ಬಲ್ಲ
ಅವಳೊಬ್ಬಳು ಚಂದದ ಹುಡುಗಿ
ಕನಸಿನ ಲೋಕದಿ ವಿಹರಿಸೋ ಬೆಡಗಿ

ಬೇಟಿಯಾದವರೀ ಚಿಕ್ಕ ಪ್ರಪಂಚದಲಿ
ಪರಿಚಯದಿಂದ ಸ್ನೇಹ , ಕನಸ ತುಂಬಿತು ಪ್ರೇಮ
ಅವಳ ಕುರುಡು ಲೋಕದ ಪ್ರೇಮದರ್ಪಣ
ಇವನಿಗೇನೋ ಇದು ಕೇವಲ ಕಾಲ ಹರಣ

ಎಷ್ಟು ದಿನ ನಡಿವುದೀ ಕಾಲ ಹರಣ
ಎಲ್ಲದಕೂ ಕೊನೆಯುಂಟು, ಕೊನೆಯುಂಟು ಕಾಲಕು
ಕನಸಿನ ಲೋಕಕು, ಉಸಿರಿಗೂ , ಆ ಭ್ರಮೆಗು
ಕೊಲ್ಲಬೇಕೆನೆಸಿದರೂ ಕೊಲ್ಲಲಾದಳು ಅವಳ ಕನಸಿನ ಲೋಕದಲಿ

ಕನಸಿನ ಲೋಕದಲಿ ಸೋಲುತಿರುವ ಇನಿಯನ ಹೃದಯ
ಅದನ್ನುಳಿಸಲು ವೈದ್ಯರ ಅಪರಿಮಿತ ಹೋರಾಟ
ಈ ಹೃದಯದ ಉಸಿರಿಗೆ ಉಸಿರಾದ ಇನ್ನೊಂದು ಜೀವ
ಮಿಸುಕಾಡದೆ ನೋಡುತಿದೆ ತನ್ನ ಸಿರಿ ಒಲವ

ಮಂಗಳವಾರ, ಮಾರ್ಚ್ 17, 2015

ಕುಂಟು ಮನ

ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ

ಬಾಲ್ಯದ ನೆನಪಿನಲೂ ಅವ ಕುಂಟ
ಆದರೂ ಯಾರೂ ಹಿಡಿಯಲಾರದ ತುಂಟ
ಹೊರ ಪ್ರಪಂಚವನರಿಯದ ವಯಸದು
ಮಿತಿಯನರಿಯಲಾರದ ಮನಸದು

ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ

ಕಾಲ ಕಳೆದಂತೆ ಸಂತೋಷ ಕಮರಿತು
ಮಿತಿಯ ಅರಿವು ಮತಿಗಾಯಿತು
ಮೊದಮೊದಲು ಎಲ್ಲರಂತೆ  ಬೆರೆಯುತಿದ್ದ
ಆದರೆ ಉಳಿದವರು ಮೇಲೆಂಬ ಭಾವನೆ ಬರಲು ಕ್ಷೀಣಿಸಿದ್ದ

ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ

ದೇಹದ ಬೇಲಿ ಮನಸಿಗತ್ತಿತು
ಕೀಳರಿಮೆ , ನಿಸ್ಸಹಾಯಕತೆ ಮನವ ತುಂಬಿತು
ಆತ್ಮಸ್ಥೈರ್ಯ ಪಾತಾಳ ಹೊಕ್ಕಿತು
ಪರಾವಲಂಬಿ ಬದುಕಾಯಿತು

ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ

ಆದರಿಂದು ರಸ್ತೆ ಬಳಿ ಗೆಳೆಯನಿಗೆ ಕಾಯುತಿರಲು
ಟಕ್ ಟಕ್   ಕೋಲಿನ ಶಬ್ದ, ಏನೆಂದು ತಿರುಗಿ ನೋಡಲು
ಕರಿ ಕನ್ನಡಕದಾರಿ ಬಾಡಿದ ಮುಖವೊಂದು ಸಹಾಯ ಕೇಳಿತ್ತು
ರಸ್ತೆ ದಾಟಲಾರದಂತೆ ಚಲಿಸುತ್ತಿರುವ ವಾಹನಗಳ ಶಬ್ದ ಕೇಳಿ ಬೆದರಿತ್ತು

ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ

ಕ್ಷಣ ಮಾತ್ರದಲಿ ಹೆಗಲಿಗೆ ಹೆಗಲು ಸೇರಿತ್ತು
ಕುರುಡನಿಗೆ ಕಣ್ಣಾಗಿ ಕುಂಟನ ನಡೆ ಸಾಗುತಿತ್ತು
ಇದೇ ಮೊದಲ ಬಾರಿಗೆ ಕುಂಟನೂ  ಸಹ ಪರ ಸಹಾಯವಿಲ್ಲದೆ ರಸ್ತೆ ದಾಟುತಿದ್ದ
 ತನಗೆ ತಾನೇ ಎಳೆದುಕೊಂಡ ಮನದ ಮಿತಿಯ ಮುರಿಯುತಿದ್ದ

ಕುಂಟನೊಬ್ಬ ರಸ್ತೆ ದಾಟುತಿದ್ದ ,ಇನ್ನೊಬ್ಬನ ದಾಟಿಸುತಿದ್ದ
ತನ್ನ ಮನೋರೋಗವ ತೊರೆದು ಪುನಃ ಬಾಲ್ಯದ ಮಂದಹಾಸ ಬೀರುತಿದ್ದ

ಶುಕ್ರವಾರ, ಮಾರ್ಚ್ 13, 2015

ಚಾರಣಿಗರು

ರಾಜು ಸೀನು ಮಾಣಿಯೆಂಬ ಜಾಲಿ ಗೆಳೆಯರು
ವಾರಾಂತ್ಯ ಬಂತೆಂದು ಕಾಡಿಗೊರಟರು

ಗಾಡಿ ತಂದ  ರಾಜು, ಕ್ಯಾಮೆರ ತೆಗೆದ ಸೀನು
ಊಟ, ತಿಂಡಿ, ಚಿಪ್ಸು ,ಬಾಟ್ಲಿ ಇಷ್ಟು ಸಾಲ್ದೇನು
ತಲೆಗೆ ಟೋಪಿ ಹಾಕಿ, ಬ್ಯಾಗನ್  ಗಾಡಿಗ್ ಬಿಸಾಕಿ
ಶಿಳ್ಳೆ ಹೊಡೆದು ಸೆಲ್ಫಿ  ತೆಗೆದು ಕಾಡಿಗೊರಟರು

ರಾಜು ಸೀನು ಮಾಣಿಯೆಂಬ ಜಾಲಿ ಗೆಳೆಯರು
ವಾರಾಂತ್ಯ ಬಂತೆಂದು ಕಾಡಿಗೊರಟರು


ಚಿರು ಯವ್ವನ ಸೌಂಧರ್ಯ , ನಿಶ್ಯಬ್ದದ ಆಂತರ್ಯ
ದಟ್ಟ  ಕಾನನದ ಬೇಲಿಯಲಿ ಮುಗಿಲೆತ್ತರಕ್ಕೆ ಬೆಳೆದ ಇಳೆಯಲಿ
ಧರೆಗೆ  ಝರಿ ಹರಿದುಬರೆ  ಹಸಿರ ನಡುವೆ ಕಾಲುದಾರಿ
ಏರಿ ತುತ್ತ ತುದಿಯ ಹಸಿರು ಹಾಸಿನ  ಸಾಲು, ತಲಪುವುದೇ ದೊಡ್ಡ ಸವಾಲು

ರಾಜು ಸೀನು ಮಾಣಿಯೆಂಬ ಜಾಲಿ ಗೆಳೆಯರು
ವಾರಾಂತ್ಯ ಬಂತೆಂದು ಕಾಡಿಗೊರಟರು

ಬ್ಯಾಕುಪ್ಯಾಕು ಹೊತ್ತು , ನಡುವೆ ಜಲಪಾತದಿ ಮಿಂದು
ಸಿಕ್ಕ  ಟೊಂಗೆ ಹಿಡಿದು, ಕೆಲುವುದ ಮುರಿದು ಕಂಡ ಫೋಟೊ ತೆಗೆದು
 ಚಡ್ಡಿ ಗೆಳೆಯರ ಈ ಗುಂಪು ಸಾಗುತಿದೆ ಮುಂದು
ಕಾಡಿನ ಅನನ್ಯ ಸೌಂಧರ್ಯದಲಿ ತೇಲುತಿದೆ ಇಂದು

ರಾಜು ಸೀನು ಮಾಣಿಯೆಂಬ ಜಾಲಿ ಗೆಳೆಯರು
ವಾರಾಂತ್ಯ ಬಂತೆಂದು ಕಾಡಿಗೊರಟರು

ತುದಿಯ  ತಲುಪಿ ಕೇಕೆ ಹಾಕಿ ಪಟವ  ನೆಟ್ಟರು
ಕುಡಿದು ತಿಂದು ತೇಗಿ ಹಾಡಿ ಮಜವ ಕಂಡರು
ಅಲ್ಲೇ ಬಾಟ್ಲಿ ಒಡೆದು, ಕೂಗಿ ಕಿರುಚಿ ನಲಿದು
ಇದ್ದ ಕಸವ ಅಲ್ಲೇ ಎಸೆದು ಮರಳಿ ಹೊರಟರು
 

ಮಂಗಳವಾರ, ನವೆಂಬರ್ 18, 2014

ಕಾಲ ಪ್ರಯಾಣ

 ಏನಿದೇನಿದೇನಿ   ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ

ಆಯಾಮವಿಲ್ಲದಿರೆ ಬಿಂದು
ದ್ವಿಗುಣಿಸಿ  ಸಾಲಾಯಿತು ಒಂದರಲಿ
ಎರೆಡನೆ ಆಯಾಮದಿ ಕಂಡಿತು ವೃತ್ತ
ವಾಯಿತು ಗೋಳ  ಕಣ್ಣರಳಿಸಿ ಜಗವ ನೋಡಲು

 ಏನಿದೇನಿದೇನಿ   ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ

 ಗೋಳದ ಅಪರಿಮಿತ ಮಿತಿಯಲೆಮ್ಮ ಚಲನೆ
ಅಲ್ಲಿ ಇಲ್ಲಿ ಎಲ್ಲೋ ಅಲ್ಲಿ ಮಗದೊಮ್ಮೆ ಇಲ್ಲಿ
ಮೂರೂ ಆಯಾಮದಲಿ ಮನಬಂದಂತೆ ಅಲಿಯುತ
ಕಾಲಮಾನದಿ ಜಗವು ನಡೆಯುತಿಹುದು

 ಏನಿದೇನಿದೇನಿ   ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ

ಆದರೆ ಕಾಲವಾದರೂ ಎಂತಹದು
ಗುಣ ಬದಲಾಯಿಸುವುದು ಗುರುತ್ವದೆದುರು
ಕಾಲದ  ವೇಗವೇ ತಗ್ಗುವುದು ಬಲವೇರಿದಂತೆ
ನಿಶ್ಚಲವಾಯಿತಿದು  ಕಪ್ಪು ರಂಧ್ರದಲಿ

 ಏನಿದೇನಿದೇನಿ   ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ

ಅರಿವರೋ ಕಾಲವ ಗುರುತ್ವ ಮಾನದಲಿ
ಕಂಡರೋ ಕಾಲವ ನಲ್ಗನೆ ಆಯಾಮದಲಿ
ಈ ಹೊಸ ಆಯಾಮದಲಿ ದ್ವಿಗುಣಿಸಿ ಸಾಲಾಗುವುದೋ
ಭೂಗೋಳ, ಆಯಾಮ ಹೆಚ್ಚಿ ಚುಕ್ಕಿ ಸಾಲಾದಂತೆ

 ಏನಿದೇನಿದೇನಿ   ಕಾಲ ಪ್ರಯಾಣ
ಎಂದೆನುತ ಮಾಡುತಿರುವಿರೆ ಕಾಲ ಹರಣ


ಈ ನಿರಂತರ ಸಾಲಿನ ಭೂಗೋಳ
ವೊಂದೊಂದು ಪ್ರತಿನಿಧಿಸುವುದೊಂದೊಂದು ಕಾಲ
ಒಮ್ಮೆ ಅಲ್ಲಿ ಮತ್ತೊಮ್ಮೆ ಇಲ್ಲಿ ಹೀಗೆ
ವಿವಿಧ ಕಾಲದ ಗೋಳಗಳಲಿ ಚಲಿಸಲು

ಆಯಿತಿದು ಕಾಲಯಾನ ಎಂದಳ್ತಿಯಿಂ  ನೋಡುತಿರೆ ಗುರುತ್ವಮಾನದೆಡೆಗೆ



ಮಂಗಳವಾರ, ನವೆಂಬರ್ 4, 2014

ಒಡಲು ಕಡಲು

ಒಡಲಿನ ಕಡಲಲಿ
ಕನಸೆಂಬ ಅಲೆಯೊಂದು 
ಜಗವೆಂಬ  ದಡದೆಡೆಗೆ 
ಹರಿಯುತಿದೆ , ಅದ್ಯಾಕೋ ಹಿಂದೆ ಸರಿಯುತಿದೆ 

ಮನದಲಿ ಕೊಂಚ ದುಗುಡ 
ಜೊತೆಗೆ ಜಗವನರಿಯುವ ತವಕ 
ಛಲಬಿಡದೆ ಭೋರ್ಗರೆಯುತಿದೆ ದಡದೆಡೆಗೆ 
ಆದರೂ ಅದೇಕೊ  ಹಿಂದೆ ಹಿಂದೆ ಸರಿಯುತಿದೆ 

ನೀರಿನ ಅಲೆಯೊಂದು ಜಗವ ಹರಿವುದೆಂತು 
ಎಂದು ನಕ್ಕರು , ಅಸಾಧ್ಯವೆಂದರು 
ಇವಲ್ಲದರ ನಡುವೆಯೂ , ಅಲೆಯು ಹರಿಯುತಿದೆ 
ಆದರೂ ಯಾಕೋ ಹಿಂದೆ ಹಿಂದೆ ಸರಿಯುತಿದೆ 

ಯಾರು ಬಲ್ಲರು ಪ್ರಕೃತಿ ಲೀಲೆ 
ಅಲೆಯು ಆವಿಯಾಗಿ, ತಣಿಯಿತು ಮೋಡವಾಗಿ 
ಮತ್ತೆ ಸೇರಿತು ಜಗವ ಹನಿಹನಿಯಾಗಿ 
ತೋಡಾಗಿ ಕವಲಾಗಿ ಜಗವ ತುಂಬಿತು ಜೀವನದಿಯಾಗಿ 

ಈ ಒಂದು ಕನಸು ಪಸರಿಸಿತು ಜಗಕೆ ಹಸಿರು 
ಜೊತೆಗೆ ಸಹಸ್ರಾರು ಜೀವಿಗಳಿಗೆ ಉಸಿರು 
ಅಚಲ ಪರಿಶ್ರಮದಿ ಕನಸಾಯಿತು ನನಸು 
ಇಂತಹ ಹಲವು ಕನಸುಗಳ ಸಮತೋಲನವೇ  ಪ್ರಕೃತಿ  
ಎಂದರಿತ ಕನಸು ಮತ್ತೆ ಸೇರಿತು ಒಡಲೆಂಬ ಕಡಲು